ಮೊನ್ನೆ ಮೊನ್ನೆಯಸ್ಟೇ ನನ್ನ ಊರು ಕುಮಟಾಕ್ಕೆ ಹೋಗಿ ಬಂದೆ. ಅಲ್ಲಿನ ಆ ಪೃಕೃತಿ ಸೌಂದರ್ಯ ನನ್ನನ್ನ ವಿಪರೀತವಾಗಿ ಕಾಡಿದವು. ಯಾಕೋ ನನ್ನ ಕೈಗಳು ವಾಟರ್ ಕಲರ್ ಪೇಂಟಿಂಗ್ ಮಾಡ್ಲಿಕ್ಕೆ ಹಪಹಪಿಸಿದವು. 15 ರಿಂದ 20 ನಿಮಿಷಗಳ ಅವಧಿಯಲ್ಲಿ ಕಣ್ಣೆದುರಿಗೆ ಕಂಡ ದೃಶ್ಯವನ್ನು ಪೇಪರ್ ಅಥವಾ ಕ್ಯಾನ್ವಾಸ್ ಮೇಲೆ ಇಳಿಸಬಲ್ಲ ಸಾಮರ್ಥ್ಯ ಇಂದು ನನ್ನಲ್ಲಿ ಇದೆ ಎಂದಾದರೆ, ಅದಕ್ಕೆ ಅಲ್ಲಿನ ಪೃಕೃತಿ ಸೌಂದರ್ಯ ಮತ್ತು ನನ್ನ ಶೃದ್ಧೆಯೇ ಕಾರಣ. ಚಿತ್ರಕಲೆಯನ್ನು ಆಸಕ್ತಿಯಿಂದ ಆಯ್ದುಕೊಂಡ ನಾನು, ಈ ಜರ್ನಲಿಸಂ ಹುಚ್ಚಿನಿಂದ ಅವನ್ನೆಲ್ಲ ಬಚ್ಚಿಟ್ಟುಕೊಂಡಿದ್ದೆ. ಆದರೆ ಖಂಡಿತ ನನ್ನಲ್ಲಿ ಇನ್ನೂ ಮತ್ತೆ ಮತ್ತೆ ಬಚ್ಚಿಟ್ಟು ಕೊಳ್ಳಲು ತಾಳ್ಮೆ ಇಲ್ಲ. ನನ್ನಿಂದ ರಚಿಸಲ್ಪಟ್ಟ ಕಲಾಕೃತಿಗಳನ್ನೆಲ್ಲಾ ಈ ಗ್ಯಾಲರಿಯಲ್ಲಿ ಪ್ರದರ್ಶಿಸುತ್ತೇನೆ.
ನಿಮಗೇನನಿಸುತ್ತೆ ನೀವೂ ಬರೆಯಿರಿ...
ನಿಮಗೇನನಿಸುತ್ತೆ ನೀವೂ ಬರೆಯಿರಿ...
![]() |
"ದಿ ಬ್ಯೂಟಿ ಆಫ್ ಟ್ರೀ' |
![]() |
"ದಿ ಬ್ಯೂಟಿ ಆಫ್ ಟ್ರೀ' |